Yoga can transform an ordinary person into an extraordinary human being, said Dr. K. Siddappa

“Yoga teaches one to enjoy every moment of life, even an ordinary person can be emerged out with great achievements by the grace of yoga”, Dr. K. Siddappa, Former Vice Chancellor of Bangalore University said in a National Seminar on ‘Yoga and Health’ organized by Yoga Practitioners Association of India (R), Mangalore in collaboration with The Institute of Chartered Accountants of India, Mangalore. The one day seminar was held on 29 th April 2018 at ICAI Bhawan, Padil, Mangalore. Vedamurthi Lakshmi Narayana Asranna, Pradhana Archaka, Kateel Durgaparameshwari Temple inaugurated the program by lightening the lamp. He wished “this enlightened lamp of yoga may spread all over the world”, in his inaugural address.

Food, proper sleep, work and recreation are the pillars of health. It should be maintain carefully. Being maintained one has to practice Asana, Pranayama and meditation technique learned under experience and teacher. Here the importance of Shvasa, Dristi, vinyasa, sthiti are used to reach subtle level of the bodies. So that one can remove the cause of a psycho somatic chronic disease from the root cause which makes a man to live longer may be hundred years by maintaining all over sensory and motor organs said by President of the programme Dr. K. Krishna Bhat, President, Yoga Practitioners Association of India and also the Director of Bhat’s International Institute of Holistic Health. Vedamurthi Lakshmi Narayana Asranna and Dr. K. Siddappa were felicitated on this occasion. C.A. Shivananda Pai, Chairman, Mangalore Branch of SIRC of The Institute of Chartered Accountants of India was also present on the stage. Dr. Udayakumara welcomed the gathering; Dr. Thirumaleshwara Prasada delivered the vote of thanks, Dr. Annapoorna and Dr. Lavya Shetty was the master of ceremonies.

People all over the world prefer simple techniques and yoga therapy effectively fulfils this requirement. It has become popular to practice various techniques of yoga for the betterment of life. Therefore Yoga Practitioners Association of India, qualified experienced young professionals of yoga organised this seminar which has been encouraged by Institute of Chartered Accountants of India. Various yoga experts, yoga researchers and health professionals presented their papers and shared their views. 15 sessions were conducted by the experts including Dr. K. Krishna Bhat, Director, Bhat’s International Institute of Holistic Health, Mangalore, Dr. Annapoorna K., HOD, Dept. of Yoga, KMC, Manipal, Mr. Rafeek Marikar, Dvaitha Hindu Yoga Vidyalayam, Kerala, Dr. Shashikanth Jain, Asst. Professor and Yoga Director, Shantivana Hospital, Dharmastala and Dr. A. Ganesh Bhat, Yogadhama, Udupi, on Foundations of Health in Yoga, Yoga Therapy for Obesity, Rejuvenation of Nervous System through Yoga, Yoga for General Health, etc. Around 150 people from various parts of the country were participated as delegates.

Seminar came to an end with the valedictory function. Yogish Bhat Former Deputy Speaker, Karnataka Legislative Assembly and Keshava Ballukaraya, Ex-chairman, ICAI Mangalore were the Chief Guests of the evening. Yogish Bhat shared his experience on how yoga helped him to overcome certain health problems. Yoga builds the energy constructively which in turn helps in overcoming all kinds of sorrows- Dr. K. Krishna Sharma, Chairman, Department of Human Consciousness and Yogic Sciences, Mangalore University, said in his presidential address. Finally resolutions were proposed by the organizing committee which will be sent to the Government with delegates’ approval.

ಯೋಗ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ಆಫ್ ಇಂಡಿಯ ಮಂಗಳೂರು ಹಾಗೂ ದ ಇನ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯ ಇದರ ಸಹಯೋಗದಲ್ಲಿ 'ಯೋಗ ಹಾಗೂ ಆರೋಗ್ಯ' ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿ 29 ಏಪ್ರಿಲ್ 2018 ರಂದು ಮಂಗಳೂರಿನ ಪಡೀಲಿನಲ್ಲಿರುವ ಐ.ಸಿ.ಎ.ಐ. ಭವನದಲ್ಲಿ ಜರಗಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವೇದಮೂರ್ತಿ ಲಕ್ಷ್ಮೀ ನಾರಾಯಣ ಅಸ್ರಣ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. "ಇಂದು ಉರಿಸಿದ ದೀಪದ ಜ್ಯೋತಿ ಸದಾ ಬೆಳಗುತ್ತಿರಲಿ" ಎಂದು ಅವರು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆ. ಸಿದ್ದಪ್ಪ ಮಾತನಾಡಿ, "ಯೋಗ ಜೀವನದ ಪ್ರತಿ ಕ್ಷಣವನ್ನು ಆನಂದಿಸುವುದನ್ನು ಕಲಿಸುತ್ತದೆ. ಒಬ್ಬ ಸಾಧಾರಣ ವ್ಯಕ್ತಿಯೂ ಕೂಡ ಯೋಗದ ಮಹಿಮೆಯಿಂದ ಅಸಾಧಾರಣ ಸಾಧನೆಯನ್ನು ಮಾಡಲು ಸಾಧ್ಯವಿದೆ" ಎಂದು ತಿಳಿಸಿದರು. ಡಾ. ಕೆ. ಕೃಷ್ಣ ಭಟ್, ಅಧ್ಯಕ್ಷರು, ಯೋಗ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ಆಫ್ ಇಂಡಿಯ ಹಾಗೂ ಡೈರೆಕ್ಟರ್ ಆಫ್ ಭಟ್ಸ್ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಹೊಲಿಸ್ಟಿಕ್ ಹೆಲ್ತ್ ಮಂಗಳೂರು ಜೀವನ ಕ್ರಮ , ಆಹಾರ, ನಿದ್ದೆ ಮತ್ತು ವ್ರತ್ತಿಪರತೆ ಇವುಗಳು ಮುಖ್ಯವಾಗಿ ನಮ್ಮ ಹಸಿವು , ಬಾಯಾರಿಕೆ, ಮಲಮೂತ್ರ ವಿಸರ್ಜನೆ, ಇವುಗಳ ಮೇಲೆ ಸಾಕಾಷ್ಟು ಪ್ರಭಾವ ಬೀರುವುದರಿ೦ದ ಇವುಗಳು ಏರುಪೇರಾಗದ೦ತೆ ನೋಡಿಕೊ೦ಡು, ವ್ಯತ್ಯಾಸವಾದರೆ ಸರಿಪಡಿಸಿಕೊ೦ಡು ಆಸನ, ಪ್ರಾಣಯಾಮ ಧ್ಯಾನದ ಅಭ್ಯಾಸಗಳನ್ನು ಯಥಾಯೋಗ್ಯವಾಗಿ ಗುರುವಿನಿ೦ದ ಕಲಿತು ಮಾಡಬೇಕು. ಇದನ್ನು ಮಾಡಿದರೆ ಸೂಕ್ಷರೂಪದ ಕಲ್ಮಶಗಳು ದೇಹ ಮತ್ತು ಬುದ್ದಿಯಿ೦ದ ಪರಿಹಾರವಗುತ್ತದೆ. ಪರಿಣಾಮವಾಗಿ ಎಲ್ಲಾ ಮನೋದೈಹಿಕ ದೀರ್ಘಕಾಲೀನ ರೋಗಗಳು ಬರದ೦ತೆ , ಬ೦ದರೆ ನಿವಾರಿಸುವ ಶಕ್ತಿಯು ಈ ಯೋಗಕ್ಕೆ ಇದೆ ಎ೦ದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದರು.

ಪ್ರಪಂಚದೆಲ್ಲೆಡೆಯ ಜನರು ಸರಳ ವಿಧಾನಗಳನ್ನು ಬಯಸುತ್ತಾರೆ ಹಾಗೂ ಯೋಗ ಥೆರಪಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. ಉತ್ತಮ ಜೀವನ ಕ್ರಮವನ್ನು ಅಳವಡಿಸುವಲ್ಲಿ ಯೋಗದ ಪಾತ್ರ ಅಪಾರ. ಇದನ್ನು ಮನಗಂಡು ಯೋಗ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ಆಫ್ ಇಂಡಿಯ ಈ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಹಲವು ಸಂಶೋಧಕರು ಹಾಗೂ ಕ್ಷೇತ್ರದ ಇತರ ಗಣ್ಯರು ತಮ್ಮ ಪ್ರಬಂಧವನ್ನು ಮಂಡಿಸಿದರು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ದೇಶದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವೇದಮೂರ್ತಿ ಲಕ್ಷ್ಮೀ ನಾರಾಯಣ ಅಸ್ರಣ್ಣ ಹಾಗೂ ಡಾ. ಕೆ. ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ದ ಇನ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯದ ಮಂಗಳೂರು ಘಟಕದ ಅಧ್ಯಕ್ಷರಾದ ಸಿ. ಎ. ಶಿವಾನಂದ ಪೈ ಉಪಸ್ಥಿತರಿದ್ದರು.

ವಿಚಾರಗೋಷ್ಠಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ರಾಜ್ಯಸಭಾ ಸದಸ್ಯರಾದ ಯೋಗೇಶ್ ಭಟ್ ಹಾಗೂ ಐ.ಸಿ.ಎ.ಐ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಕೇಶವ ಬಳ್ಳೂಕರಾಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯೋಗೇಶ್ ಭಟ್ 'ಯೋಗ ತಮ್ಮ ಜೀವನದಲ್ಲಿ ಅನಾರೋಗ್ಯದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ವಹಿಸಿದ ಪಾತ್ರ'ದ ಕುರಿತಾಗಿ ಅನುಭವಗಳನ್ನು ಹಂಚಿಕೊಂಡರು. ಯೋಗವು ಎಲ್ಲಾ ತರಹದ ದುಃಖಗಳನ್ನು ಹೋಗಲಾಡಿಸಲು ನೆರವಾಗುತ್ತದೆ" ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಭಾಗದ ಅಧ್ಯಕ್ಷರಾದ ಡಾ. ಕೆ. ಕೃಷ್ಣ ಶರ್ಮ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಸರ್ವರ ಅನುಮತಿಯೊಂದಿಗೆ ಸರಕಾರಕ್ಕೆ ಬೇಡಿಕೆಗಳನ್ನು ಮುಂದಿಡಲಾಯಿತು.

ಡಾ. ಉದಯಕುಮಾರ ಸ್ವಾಗತಿಸಿ, ಡಾ. ತಿರುಮಲೇಶ್ವರ ಪ್ರಸಾದ ವಂದಿಸಿದರು. ಡಾ. ಅನ್ನಪೂರ್ಣ ಕೆ. ಹಾಗೂ ಡಾ. ಲಾವ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.